Sunday, January 3, 2016

ಸ್ವ-ಪರಿಚಯ

ಸ್ವ-ಪರಿಚಯ
ಹೆಸರು                                 : ಸತ್ಯನಾರಾಯಣ ಮುಜುಮದಾರ
ತಂದೆಯ ಹೆಸರು                      : ತಿರುಮಲರಾವ ಮುಜುಮದಾರ
ತಾಯಿಯ ಹೆಸರು                     : ಸುಂದರಾಬಾಯಿ
ಹುಟ್ಟೂರು                             : ಗುಡುಗುಂಟಿ, ತಾಲೂಕು ಲಿಂಗಸೂಗೂರು, ಜಿ|| ರಾಯಚೂರು.
ಹುಟ್ಟಿದ ದಿನಾಂಕ                      : 02-01-1950
ವಿದ್ಯಾಭ್ಯಾಸ                          : ಎಸ್.ಎಸ್.ಎಲ್.ಸಿ. ಗುಡುಗುಂಟಿಯಲ್ಲಿ ಎಪ್ರಿಲ್ 1966
ಬಿ.ಎಸ್ಸಿ. ಶ್ರೀ ವಿಜಯಮಹಾಂತೇಶ ಕಾಲೇಜ್, ಇಳಕಲ್ಲ
ಎಪ್ರಿಲ್ 1970
ಎಂ.ಎಸ್ಸಿ. ಸ್ನಾತಕೋತ್ತರ ಕೇಂದ್ರ ಕುಲಬುರ್ಗಿ.
(ಕರ್ನಾಟಕ ವಿಶ್ವವಿದ್ಯಾಲಯ ಎಪ್ರಿಲ್ 1972)
ಉದ್ಯೋಗ : ಕೆನರಾ ಬ್ಯಾಂಕಿಗೆ ಸೇರಿದ ದಿನ : 23-04-1973

ಅಧಿಕಾರಿ ಬಡ್ತಿ                        : ಅಕ್ಟೋಬರ್ 1982
ಪ್ರಬಂಧಕನಾಗಿ                       : ಜೂನ್ 1996
ಮುಖ್ಯ ಪ್ರಬಂಧಕನಾಗಿ               : ಜೂನ್ 2004
ನಿವೃತ್ತಿ                                    : 31-1-2010

ಶ್ರೀ ವಿಶ್ವಾಮಿತ್ರರ ಅನುಗ್ರಹದಿಂದ
ಕವನ ಬರೆಯಲು ಪ್ರಾರಂಭಿಸಿದ ದಿನ    : 20-02-1999
ಬರೆದ ಕವನಗಳು                        : 4500 ಕ್ಕೂ ಮೇಲ್ಪಟ್ಟು
ಪುಸ್ತಕ ರೂಪದಲ್ಲಿ ಮುದ್ರಿತ ಕವನಗಳು  : 1521
ಕವನ ಸಂಗ್ರಹಗಳು                      : 23
ಕಾವ್ಯನಾಮ                              : ಋಷಿಕಂದ
ಅಂಕಿತ                                    : ಶ್ರೀಪ್ರಭು
ಸದ್ಯದ ವಿಳಾಸ                           : # 7-6-20/15ಡಿ, ವೇದಾದ್ರಿ,
ವಾಸವಿನಗರ, ರಾಯಚೂರು 584 103
ದೂ.: 08532-241366
ಮೊಬೈಲ್ : 94490 66878

ಪಡೆದ ಪ್ರಶಸ್ತಿಗಳು
ಶ್ರೀ ಯಾಜ್ಞವಲ್ಕ್ಯ ಪ್ರಶಸ್ತಿ -2013             - ಶ್ರೀ ಯೋಗೀಶ್ವರ ಯಾಜ್ಞಲ್ಕ್ಯ ಸೇವಾ ಸಂಘ, ಧಾರವಾಡ.
ಕಾಣ್ವಶ್ರೀ ಪ್ರಶಸ್ತಿ -2013                     - ಶ್ರೀ ಶುಕ್ಲ ಯಜುಃ ಶಾಖಾ ಟ್ರಸ್ಟ್ (ರಿ.), ಶ್ರೀ ಯಾಜ್ಞವಲ್ಕ್ಯ
    ಆಶ್ರಮ ಚಾಮರಾಜ ಪೇಟೆ, ಬೆಂಗಳೂರು.
ಕಣ್ವರತ್ನ ಪ್ರಶಸ್ತಿ                                - ಅಖಿಲ ಭಾರತ ಶುಕ್ಲಯಜುರ್ವೇದೀಯ ಕಣ್ವ ಪರಿಷತ್,
    ನಾಸಿಕ. 14ನೇ ಸಮ್ಮೇಳನ 18-03-2014 ರಿಂದ 20-3-2014
ಕವನ ಸಂಕಲನಗಳು :-
1. ಪ್ರಭಾವಳಿ                   2. ಪದಪುಗುಚ್ಛ              3. ವರನಿನಾದ
4. ಭಾವಚಿಲುಮೆ               5. ಭಾವ ಬುಗ್ಗೆ               6. ಮೌನಮಿಡಿದಾಗ
7. ದೇವಭಾವ                  8. ಅಂತಃಕರಣ              9. ಅಂತರ್ ಪಯಣ
10. ಉಲಿಪು                  11. ಶೋಧ                  12. ಪಡಿನೆಳಲು
13. ಬಿಚ್ಚುಹೂಗಳು           14. ಹೂಗೊಂಚಲು          15. ಸೊಡರಿನ ಕದಿರಲಿ
16. ನಿಶ್ಯಬ್ದ ಬಾಂದಳದಲಿ    17. ಭಾವ ತಳಿರು           18. ಗೀತ ತೋರಣ
19. ಅಮೃತಮಯ           20. ನಿರವದ್ಯನ ನೆನಪಿನಲಿ  21. ತನಿವೆಳಗು
22. ಋತಭಾವ               23. ಅಲರು ತೋರಣ       24. ಎಣ್ದೆಶೆಯಲಿ
 25. ದಿವ್ಯ ಸಾನಿಧ್ಯ (ಹಿಂದಿ)

ಬಿಚ್ಚುಹೂಗಳು ಕವನ ಸಂಕಲನವು ಸೊಲ್ಲಾಪುರ ವಿಶ್ವವಿದ್ಯಾಲಯದ ಬಿ.ಕಾಂ. 2ನೇ ಸೆಮಿಸ್ಟರ್ ಕೋರ್ಸಿಗೆ
ಪಠ್ಯಪುಸ್ತಕವಾಗಿತ್ತು (2009-2012).

ನಿರ್ದೇಶಕರ ಕಛೇರಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ,
ವಿಶ್ವೇಶ್ವರಯ್ಯ ಮುಖ್ಯಗೋಪರ, ಅಂಬೇಡ್ಕರ ವೀದಿ, ಬೆಂಗಳೂರು. ಇವರಿಂದ ಆಯ್ಕೆಗೊಂಡ ಗ್ರಂಥಗಳು.
ಸೊಡರಿನ ಕದಿರಲಿ             - 2007 - 2008
ಭಾವತಳಿರು                   - 2008 - 2011
ನಿರವದ್ಯನ ನೆನಪಿನಲಿ         - 2009 - 2010
ತನಿವೆಳಗು                     - 2010 - 2011
ಋತಭಾವ                     - 2011 - 2012
ದಿವ್ಯ ಸಾನಿಧ್ಯ (ಹಿಂದಿ)         - 2013 – 2014

ಋಷಿಪುಂಗವ ಯೋಗೀಶ್ವರ ಯಾಜ್ಞವಲ್ಕ್ಯರು (ಹಿಂದಿ) - 2013-2014
ಪೌರಾಣಿಕ / ಐತಿಹಾಸಿಕ / ಸಂಶೋಧನಾ ಸಾಹಿತ್ಯ
1. ತಪೋಭೂಮಿ ವೀರಘಟ್ಟದ ಮಾಧವತೀರ್ಥರು                              - ನಾಟಕ
2. ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯರು ಮತ್ತು ಅವರ ಪೂರ್ವಜರು               - ಸಂಶೋಧನಾ ಕೃತಿ
3. ಶ್ರೀ ಯಾಜ್ಞವಲ್ಕ್ಯ ಅಷ್ಟೋತ್ತರ                                                - ಸಂಪಾದನಾ ಕೃತಿ
4. ಜಾಬಾಲೋಪನಿಷತ್                                                          ( ’’ )
5. ಕಾಣ್ವ -ತ್ರಿಕಾಲ ಸಂಧ್ಯಾ                                                       ( ’’ )
6. ದೇವತಾರ್ಚನ ವಿಧಿಃ                                                          ( ’’ )
7. ಮಹರ್ಷಿ ಕಣ್ವರ ನೆಲೆಗಳು                                                 - ಸಂಶೋಧನಾಕೃತಿ
8. ಶ್ರೀ ಯಾಜ್ಞವಲ್ಕ್ಯರ ನಿವಾಸಸ್ಥಾನ                                         -ವಡನಗರ
9. ಶ್ರೀ ಯಾಜ್ಞವಲ್ಕ್ಯರ -ಆಶ್ರಮಸ್ಥಾನ                                        -ಯಾಜ್ಞವಲ್ಕ್ಯಸ್ಥಾನ ( ’’ )
 ಜಗವನ (ಬಿಹಾರ)
10. ಕೀರ್ತನೆಗಳು                                                         - ರಚನೆ
11. ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯರ ಅಷ್ಟೋತ್ತರ                        - ಸಂಪಾದನಾ ಕೃತಿ
12. ಋಷಿ ಪುಂಗವ ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ                       - ಹಿಂದಿಭಾಷೆಗೆ ಅನುವಾದಿತ
13. ಶ್ರೀಕಣ್ವ ಮಹರ್ಷಿಲ ತಪೋನಿಲಯಾಲು                              - ತೆಲುಗುಭಾಷೆಗೆ ಅನುವಾದಿತ
14. ಕಣ್ವ ಶಾಖೆಯ ಗೌರವ                                                 - ಸಂಪಾದನಾ ಕೃತಿ
15. ಮಹಾಸಾದ್ವಿ ತುರಡಗಿ ತಿಮ್ಮಮ್ಮನವರು                              - ನಾಟಕ
16. ಶ್ರೀ ಯಾಜ್ಞವಲ್ಕ್ಯಲವಾರಿ ಆಶ್ರಮ ಸ್ಥಾನಮು-ಜಗವನಮು             - ತೆಲುಗು ಭಾಷೆಗೆ ಅನುವಾದಿತ ಕೃತಿ
17. ಸಂಧ್ಯಾವಂದನೆ - ಗಾಯತ್ರಿ ಮಹಿಮೆ                                 - ಸಂಪಾದನಾ ಕೃತಿ
18. ಶ್ರೀ ಮಾಧವ ತೀರ್ಥರು                                               - ಕೀರ್ತನೆಗಳ ಸಂಗ್ರಹ
19. ಶ್ರೀ ಟೋಕದಾಸರು                                                      - ಕೀರ್ತನೆಗಳ ಸಂಗ್ರಹ


ಸಂಶೋಧನಾ / ಸಂಪಾದಿತ ಲೇಖನಗಳು :
1. ತಪೋಭೂಮಿ ವೀರಘಟ್ಟ
2. ಶ್ರೀ ಕಣ್ವಾಶ್ರಮ ಕ್ಷೇತ್ರ ಬೀಚಪಲ್ಲಿ
3. ಭಗವಾನ ಶ್ರೀ ಸೂರ್ಯನಾರಾಯಣ
4. ಮಹರ್ಷಿ ಕಣ್ವರ ನೆಲೆಗಳು
(ಕಣ್ವತೀರ್ಥ, ತೊಡಿಖಾನ, ಮಾಗಡಿ, ದೊಡ್ಡಮಳೂರು, ಕೂಡಲೂರು, ಕೂರಣಗೆರೆ.)
5. ಪ್ರಥಮ ಶಾಖಾ ಮಹತ್ವ ವಿಚಾರವು
6. ಸೊಗಲ ಬನದಲ್ಲಿ ಶ್ರೀ ಕಣ್ವರು
7. ಕಣ್ವಾಶ್ರಮ (ಪೌಡಿ ಗಢವಾಲ) ಮತ್ತು ರಾವಲಿ (ಬಿಜನೌರ) ದಲ್ಲಿ ಶ್ರೀ ಕಣ್ವರ ಆಶ್ರಮಗಳು)
8. ಪುಷ್ಕರ
9. ಖೇಡ ಬ್ರಹ್ಮ
10. ಮಹರ್ಷಿ ಕಣ್ವ ಆಶ್ರಮ ಕಾನಳದಾ
11. ಶ್ರೀ ಕಣ್ವಮುನಿ ಆಶ್ರಮ - ಕಂದರ
12. ಮಹರ್ಷಿ ಕಣ್ವರ ತಪೋಭೂಮಿ (ಕಣ್ವಕುಪ್ಪೆ & ಕೊಣ್ಣೂರು)
13. ಮಹರ್ಷಿ ಕಣ್ವರ ತಪೋವನ (ಪೆಂಚಲಕೋನ)
14 ಯಾಜ್ಞವಲ್ಕ್ಯರ ತಪೋಭೂಮಿ ಕಾತ್ಯಾಯನಿ ಗೋಶಾಲೆ, ಕೆರೆಕತ್ತಿಗನೂರು
ಮೈತ್ರೇಯಿ ತೀರ್ಥ / ಗುಹೆ, ಸೀಗೆಪಾಳ್ಯ
15. ವೇದಶಾಖೆಗಳ ಹಾಗೂ ಶ್ರೀ ಯಾಜ್ಞವಲ್ಕ್ಯರ ಮತ್ತು ಶ್ರೀ ಕಣ್ವರ ತಪೋಭೂಮಿಗಳ ಸಂಕ್ಷಿಪ್ತ ಪರಿಚಯ
16. ಮಹರ್ಷಿ ಕಣ್ವರ ತಪೋವನ - ವರ್ಕಲಾ (ತಿರುವನಂತರಂ ಜಿಲ್ಲಾ ಕೇರಳ)
17. ಮಹರ್ಷಿ ಗಾಲವರು
18. ಮಹರ್ಷಿ ಕಣ್ವರು (ಕಲ್ಲಿಡೈಕುರಿಚಿ, ಕಣ್ಸುವಾಧಾಮ, ನಂದಪ್ರಯಾಗ ಇತ್ಯಾದಿ)
19. ಮಹರ್ಷಿ ಕಣ್ವರು ಮತ್ತು ಯೋಗೀಶ್ವರ ಯಾಜ್ಞವಲ್ಕ್ಯರು
20. ಕಣ್ವಾಶ್ರಮದ ಜಂಬೂಫಲ
21. ತಾಪಸ ಕಣ್ವರು
22. ಗೋದಾವರಿ ತೀರದಲ್ಲಿ ಶ್ರೀ ಕಣ್ವರು
23. ಶಿಷ್ಯ ರಾಜಾ ಜನಕನಿಗೆ ಗುರುದೇವ ಶ್ರೀ ಯಾಜ್ಞಲ್ಕ್ಯರ ಉಡುಗೊರೆ (ಬಂಗಾರದ ಉಂಗುರ ಉಪಕಥೆ)
24. ವಾಚಕ್ನವೀ ಗಾರ್ಗೀ
25. ತುಲಸೀದಾಸರು ಕಂಡ ಶ್ರೀ ಯಾಜ್ಞವಲ್ಕ್ಯ ಮತ್ತು ಶ್ರೀ ಭರದ್ವಾಜ ಋಷಿಗಳು
26. ಯೋಗೀಶ್ವರ ಯಾಜ್ಞವಲ್ಕ್ಯರಿಗೆ ಶ್ರೀ ಆಂಜನೇಯನು ತೋರಿದ ಶ್ರೇಷ್ಠ ಗುರುಭಕ್ತಿ


ಪರಿಚಯ : ಸತ್ಯನಾರಾಯಣ ಮುಜುಮದಾರ (ಬರೆಧವರು :- ವಿ.ಎಸ್. ಕಾಂತನವರ್ ಸಾಹಿತಿಗಳು)


PC:- Raghutilak Mujumdar

          ಇವರು ಬಾಗಲಕೋಟೆ ಜಿಲ್ಲೆ ಇಳಕಲ್ಲಿನಲ್ಲಿ ಜನಿಸಿದರು. ಇವರು ಗುಡುಗುಂಟಿಯ ಶ್ರೀ ತಿರುಮಲರಾವ್ ಮುಜುಮದಾರ್ ಮತ್ತು ಶ್ರೀಮತಿ ಸುಂದರಾಬಾಯಿ ದಂಪತಿಗಳ ಪುತ್ರ. ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ರಾಯಚೂರು ಜಿಲ್ಲಾ ಲಿಂಗಸೂಗೂರು ತಾಲೂಕು ಗುಡಗುಂಟಿ ಸರಕಾರಿ ಶಾಲೆಯಲ್ಲಾಯಿತು. ಪ್ರೌಢ ವಿದ್ಯಾಭ್ಯಾಸ ಟಿ.ಡಿ.ಬಿ. ಹೈಸ್ಕೂಲಿನಲ್ಲಾಯಿತು. 1966 ರಲ್ಲಿ ಇವರದೇ ಮೊದಲ ತಂಡ. ಇಳಕಲ್ಲಿನಲ್ಲಿ ಕಾಲೇಜು ವಿದ್ಯಾಭ್ಯಾಸ. ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ 1970ರಲ್ಲಿ ಬಿ.ಎಸ್ಸಿ. ಪದವಿಗಳಿಸಿದರು. ಇವರ ಅಜ್ಜ- ಅಜ್ಜಿಯೇ ಶಿಕ್ಷಣ ಪಡೆಯಲು ಕಾರಣವಾದರು. ಕಡು ಬಡತನ. ಆದರೆ ಇವರಿಗೆ ವಿದ್ಯಾರ್ಜನೆಯ ದಾಹ, ಅಂತೂ ಹೇಗೋ ಅದೇ ತಾನೆ ಕಲಬುರ್ಗಿಯಲ್ಲಿ ಪ್ರಾರಂಭವಾದ ಸ್ನಾತಕೋತ್ತರ ಕೇಂದ್ರದಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. 1973 ರಲ್ಲಿ ಕೆನರಾ ಬ್ಯಾಂಕಿನಲ್ಲಿ ವೃತ್ತಿಜೀವನ ಆರಂಭ. 1981 ರಲ್ಲಿ ಅಧಿಕಾರಿಯಾಗಿ ಬಡ್ತಿ. 1996 ರಲ್ಲಿ ಪ್ರಬಂಧಕರಾಗಿ 2004 ರಲ್ಲಿ ಮುಖ್ಯಪ್ರಬಂಧಕರಾಗಿ 2010 ರಲ್ಲಿ ನಿವೃತ್ತರಾದರು. ಅಧಿಕಾರಾವಧಿಯಲ್ಲಿ ಹೊಸದುರ್ಗ, ಕಲಬುರ್ಗಿ, ಕೊಪ್ಪಳ, ಮಾಸೂರು ಪನಿವಾಲಾಮೋಟ ಇತ್ಯಾದಿ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದರು. ಪ್ರವೃತ್ತಿಯಿಂದ ಸಾಹಿತಿಗಳು. ಆದರೆ ಕವಿ ಮನೋಧರ್ಮದ ಇವರು ಹೆಚ್ಚಾಗಿ ಕವಿತೆಗಳನ್ನೇ ರಚಿಸಿದ್ದಾರೆ. 1999 ರಲ್ಲಿ ಇವರ ಪ್ರಥಮ ಕವನ ಸಂಕಲನ ಪ್ರಕಟವಾಯಿತು. ನಂತರ ಇವರ 23ಕ್ಕೂ ಹೆಚ್ಚು ಕವನಸಂಕಲನಗಳು ಪ್ರಕಟವಾಗಿವೆ. ‘ಬಿಚ್ಚು ಹೂಗಳು’2009-12 ನೇ ಸಾಲಿನ ಸೊಲ್ಲಾಪುರ ವಿಶ್ವವಿದ್ಯಾಲಯ ಬಿ.ಕಾಂ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿದೆ. ಇವರು 4
ಸಂಶೋಧನಾ ಕೃತಿ ಗಳು ಒಂದು ನಾಟಕ ಹಾಗೂ 6 ಗ್ರಂಥಗಳ ಸಂಪಾದಕರಾಗಿದ್ದಾರೆ. ಹೊಸದುರ್ಗದಲ್ಲಿದ್ದಾಗ ಶ್ರೀ ಶ್ರೀಕಂಠಯ್ಯ ಇವರಿಂದ ಸನಾತನ ಧರ್ಮದ ಪರಿಚಯವಾಯಿತು. ಕಲ್ಬುರ್ಗಿಯಲ್ಲಿ ಶ್ರೀ ಪಂಡಿತರಾವ್ ಸರಾಫ್ ಇವರಿಂದ ಉಪನಿಷತ್ತಿನ ಪರಿಚಯ. ಕೊಪ್ಪಳದಲ್ಲಿ ನಾಲ್ಕು ವರ್ಷ ಶ್ರೀ ನಾರಾಯಣಶಾಸ್ತ್ರಿಯವರಲ್ಲಿ ವೇದಾಧ್ಯಯನ ಮಾಡಿದರು. ಬಸವ ಕಲ್ಯಾಣದಲ್ಲಿರುವಾಗ ಕವನ ರಚನೆಗೆ ಪ್ರಾರಂಭಿಸಿದರು. ನಂತರ ಇವರು 4500 ಕ್ಕೂ ಹೆಚ್ಚು ಕವನಗಳನ್ನು ರಚಿಸಿದರು. ದಾವಣಗೆರೆಯಲ್ಲಿರುವಾಗ ಇವರಿಗೆ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಪರಿಚವಾಗಿ ಅವರ ಗ್ರಂಥಗಳನ್ನೆಲ್ಲ ಓದಿದ ಮೇಲೆ ಆಧ್ಯಾತ್ಮದ ಬಗ್ಗೆ ಹೆಚ್ಚಿನ ಆಸಕ್ತಿವುಂಟಾಯಿತು. ತಮಗೆ ಆಧ್ಯಾತ್ಮದತ್ತ ಒಲವು ಮೂಡಲು ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿ ಮತ್ತು ಯುಸೂಫ್ ಖಾನ ಇವರೇ ಕಾರಣರೆನ್ನುತ್ತಾರೆ.

          ಪ್ರಾರಂಭದಿಂದಲೂ ಸುಪ್ತಾವಸ್ಥೆಯಲ್ಲಿದ್ದ ಶ್ರದ್ಧಾಭಕ್ತಿಗಳು ಇತ್ತೀಚೆಗೆ ಸಂಶೋಧನಾ ಕೃತಿಗಳಾಗಿ ಓದುಗರನ್ನು ಸೆಳೆದುಕೊಂಡಿವೆ. ಶ್ರೀ ಕಣ್ವಮಹರ್ಷಿಗಳ ನೆಲೆಗಳು, ಶ್ರೀ ಮಾಧವ ತೀರ್ಥರ ಪರಿಚಯ ಕೃತಿ, ಯೋಗೀಶ್ವರ ಯಾಜ್ಞವಲ್ಕ್ಯರ ನಿವಾಸ ಸ್ಥಾನ, ವಡನಗರ. ಯಾಜ್ಞವಲ್ಕ್ಯರು ಮತ್ತು ಅವರ ಪೂರ್ವಜರು ಮುಂತಾದ ಸಂಶೋಧನಾ ಕೃತಿಗಳು ಓದುಗರ ಕೈಸೇರಿವೆ.
         ಶ್ರೀಯುತರು ಸಂಘಟನಾ ಕಾರ್ಯಕರ್ತರಾಗಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ದೇವದುರ್ಗ ತಾಲೂಕಿನ ವೀರಘಟ್ಟ ಎಂಬಲ್ಲಿ ಶ್ರೀ ಮಾಧವತೀರ್ಥರ ತಪೋಭೂಮಿ ಅಭಿವೃದ್ಧಿ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 6 ಲಕ್ಷದ ಮೊತ್ತದ ಕಾರ್ಯವು ಪೂರ್ಣಗೊಂಡಿದೆ.

       ಸ್ಥಳೀಯ ಶ್ರೀ ವಿ.ಎಸ್. ಕಾಂತನವರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾಗ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿಷ್ಠಾನದ ಕೇಂದ್ರವ್ಯಕ್ತಿ ಶ್ರೀ ವಿ.ಎಸ್. ಕಾಂತನವರ ಸಂಭಾವನಾ ಗ್ರಂಥದ ಪ್ರಕಾಶಕರಾಗಿದ್ದಾರೆ.
       
        ಬಿಹಾರ ರಾಜ್ಯದ ಮಿಥಿಲಾಂಚಲ ಪ್ರದೇಶದಲ್ಲಿರುವ ಮಧುಬನಿ ಜಿಲ್ಲೆಯ ಜಗವನವು ಶ್ರೀ ಯಾಜ್ಞವಲ್ಕ್ಯರ ಆಶ್ರಮ ಸ್ಥಾನವು ಅಲ್ಲಿ ಸುಮಾರು 1 ಲಕ್ಷ ರೂ.ಗಳ ಶ್ರೀ ಯಾಜ್ಞವಲ್ಕ್ಯರ ಸುಂದರ ಶಿಲಾಮೂರ್ತಿಯನ್ನು ಸ್ಥಾಪಿಸಲು ಸಂಕಲ್ಪಿಸಿದ್ದು ಅದು ಇಷ್ಟರಲ್ಲಿಯೇ ಸಾಕಾರಗೊಳ್ಳಲಿದೆ

        ಶ್ರೀ ಯಾಜ್ಞವಲ್ಕ್ಯರ ಜನ್ಮ ಭೂಮಿಯ ಗುಜರಾತ ರಾಜ್ಯದ ಮೆಹಸಾಣ ಜಿಲ್ಲೆಯ ವಡನಗರ ಎಂದು ಇವರು ಸಂಶೋಧಿಸಿ, ಗುಜರಾತ ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಮೆಹಸಾಣ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅದನ್ನು ಮನವರಿಕೆ
ಮಾಡಿಕೊಟ್ಟು ಅಲ್ಲಿ ಮಹರ್ಷಿ ಯಾಜ್ಞವಲ್ಕ್ಯರ ಸ್ಮಾರಕ ನಿರ್ಮಾಣ ಮಾಡುವ ಮಾತು ಪಡೆದಿದ್ದಾರೆ.



ರಾಯಚೂರು
04-08-2014